ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...
ಬದುಕು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬದುಕು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜುಲೈ 2, 2010

ಪರಿಪೂರ್ಣ ಬದುಕು



ದೊಡ್ಡದಾಗಿ ಅಡ್ಡಡ್ಡ ಬೆಳೆವ
ಬೃಹತ್ ನೀಲಗಿರಿಯ ಮರದಂತೆ
ನೂರಾರು ವರ್ಷ ನಿಂತು
ಬೋಳಾಗಿ ಬಿದ್ದು ಹೋಗುವುದು ಬದುಕಲ್ಲ…
ವಸಂತ ಕಾಲದ
ಒಂದೇ ದಿನ ಆಯಸ್ಸಿನ
ನೈದಿಲೆಯ ಹೂವಂತೆ
ಅದೇ ರಾತ್ರಿ ಉದುರಿ ಸತ್ತರೂ
ಮನದಲ್ಲಚ್ಚಳಿಯದ ಭಾವ..
ಚಿಕ್ಕದಾದರೂ ಅಪೂರ್ವ ಸೌಂದರ್ಯ
ಪರಿಪೂರ್ಣ ಬದುಕೆಂದರೆ ಹೀಗಿರಬೇಕು
ಚಿಕ್ಕದ್ದಾಗಿ ಚೊಕ್ಕವಾಗಿ…

ಇಂಗ್ಲೀಷ್ ಮೂಲ: ಬೆನ್ ಜಾನ್ಸನ್