ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...
ವಿಪರ್ಯಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಪರ್ಯಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮಾರ್ಚ್ 16, 2010

ವಿಪರ್ಯಾಸ

ಧನದಾಹ ತೊರೆದು
ಬೆಟ್ಟದ ಮೇಲೆ ಬೆತ್ತಲೆ ನಿಂತ
ಬಾಹುಬಲಿಯ
ಕಾಲಿನ ಬಳಿ
ಕಾಣಿಕೆ ಹುಂಡಿ…!

# ## ## ## #

ತಣ್ಣನೆಯ
ನೀರಿನಲ್ಲೂ
ಬಿಸಿ ಸೂರ್ಯ
ಬಿಂಬಿಸುತ್ತಾನೆ…

# ## ## #

ಉಳುಮೆ ಮಾಡಿ
ಹೃದಯ ಸೀಳಿ
ಬಿತ್ತಿದರೂ
ಇಳೆ
ನಮಗೆ
ಹಸಿರನ್ನೇ
ಕೊಡುತ್ತಾಳೆ..

# ## ## #

ಕಾಲಡಿಯ
ಬೆಲೆಬಾಳುವ
ಮಣ್ಣನು ಬಿಟ್ಟು
ಕಡಲಾಳದ
ಬಿಳಿ ಮುತ್ತಿಗೆ
ಹಂಬಲಿಸುತ್ತೇವೆ…