ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಗುರುವಾರ, ಏಪ್ರಿಲ್ 30, 2009

ಇದು ಗೃಹಿಣಿ ಗೀತೆ ...!

ಇತ್ತೀಚೆಗೆ ಗೆಳೆಯ ಮಧುಸೂಧನ ಅವರಮ್ಮ ಬರೆದ ಕವನಗಳಿರುವ ಒಂದು ಪುಸ್ತಕವನ್ನು ತಂದು ನನ್ನ ಕೈಗಿತ್ತು ಓದಿ ನೋಡು ಅಂದ. ನೀನು ಹ್ಯಾಗೂ ಪತ್ರಿಕೆಗಳಿಗೆ ಬರೀತೀಯಲ್ಲಾ ಇವನ್ನೂ ಯಾವುದಾದರೂ ಪತ್ರಿಕೆಗೆ ಕಳುಹಿಸು ಎಂದ. ಪುಸ್ತಕ ತೆರೆದು ನೋಡಿ ನಿಜಕ್ಕೂ ಒಂದು ಕ್ಷಣ ದಂಗಾದೆ! ಕೇವಲ ನಾಲ್ಕನೇ ಕ್ಲಾಸ್ ತನಕ ಓದಿರುವ ಓರ್ವ ಸಾಮಾನ್ಯ ಗೃಹಿಣಿ ಬರೆದ ಅಚ್ಚುಕಟ್ಟಾದ ಕವನಗಳು...ಬರೆದ ನೂರಾರು ಕವನಗಳಲ್ಲೂ ಬೇರೆ ಬೇರೆ ವಿಚಾರ ವಿಭಿನ್ನ ಭಾವ..ನಾಡು,ನುಡಿ,ಮನಸು,ನಿಸರ್ಗ,ಸಂಸಾರ,ಮಗುವಿನ ಚಿನ್ನಾಟ,ಕುಡುಕ ಪತಿ, ದುರಾಸೆ, ತವರಿನ ಪ್ರೀತಿ, ಮಾಂಗಲ್ಯ ಪ್ರೇಮ...ಅಬ್ಬಬ್ಬಾ ಅವರು ಬರೆಯದ ವಿಷಯಗಳಿಲ್ಲ.ದೈನಂದಿನ ಜೀವನ ದರ್ಶನದಿಂದ ಹುಟ್ಟಿದ ಕವಿತೆಗಳು...ಅವನ್ನು ಬರೆದ ಪಾರ್ವತಮ್ಮ ಅವರಿಗೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇ ಬೇಕು...
ಇಲ್ಲಿವೆ ಅದರ ಒಂದೆರೆಡು ಸ್ಯಾಂಪಲ್...
...............................
ಒನಕೆ ಓಬವ್ವ

ಅಂದು ಹಾಕಿದ್ದಳು ವೀರಗಚ್ಚೆಯ
ಒನಕೆ ಓಬವ್ವ
ನಾಡನ್ನು ರಕ್ಷಿಸಲು;

ಇಂದು ನಾವು ಹಾಕುವೆವು ಚೂಡೀದಾರ
ರಾವಣರಿಂದ ರಕ್ಷಿಸಿಕೊಳ್ಳಲು...
................................
ಮಾಂಗಲ್ಯದ ಮೂರು ಗಂಟು

ಒಂದನೇ ಗಂಟು ಅತ್ತೆಗೆ
ಮತ್ತೊಂದು ಗಂಟು ಮಾವಗೆ
ಮೂರನೆಯ ಗಂಟು ನಿನಗೆ ಶರಣಾದೆನಮ್ಮಾ ಎಂದು-
ಆದರೆ ಸಪ್ತಪದಿ ಎಂದರೇ ಅಗಲಿಕೆ
ಅಪ್ಪ,ಅಮ್ಮ,ಅಣ್ಣ,ತಮ್ಮ,ಬಂಧು-ಬಳಗ
ಎಲ್ಲ ಮರೆಯುವುದೇ ಸಪ್ತಪದಿ.
ಹಳೆ ಸಂಬಂಧ ಮರೆತು ಹೊಸ ಬಳಗಕ್ಕೆ ಹೋಗುವ
ನನಗೆ ಆರೈಸಲೆಂಡೇ ಬ್ರಹ್ಮ ಭೋಜನ..
ರಾತ್ರಿಯೆಲ್ಲಾ ನಿದ್ದೆಗೆಟ್ಟು ದುಡಿದರೂ
ಲಕ್ಷ್ಮಣರೇಖೆ,ಸಂಪ್ರದಾಯದ ಬಂಧನ
ಅದೇ ಸಪ್ತಪದಿ,ಮದುವೆಯೆಂಬ ಬಂಧನ....

-ಕವಯಿತ್ರಿ: ಪಾರ್ವತಮ್ಮ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ