ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಭಾನುವಾರ, ಆಗಸ್ಟ್ 17, 2008

ನನ್ನ ಹನಿಗಳು

*ವಿಪರ್ಯಾಸ *
ಕಾಲಡಿಯ
ಬೆಲೆ ಬಾಳುವ
ಮಣ್ಣನು ಬಿಟ್ಟು
ಕಡಲಾಳದ
ಬಿಳಿ ಮುತ್ತಿಗೆ
ಹಂಬಲಿಸುತ್ತೀವೆ...
*ಪಾಂಚಾಲಿ*
ಒಂದೇ
ಹೂವಿಗೆ
ಐದು
ದುಂಬಿಗಳು...
*ನಿರ್ಧಾರ*
ಹೂವಾಗಿ ನಾನು
ಬಾಡಿದರೇನು?
ಕಾಯಾಗಿ,
ಹಣ್ಣಾಗಿ
ಮತ್ತೆ ಅರಳುವೆನು...
*ಸಾಮರ್ಥ್ಯ*
ತಣ್ಣನೆಯ
ನೀರಿನಲ್ಲೂ
ಬಿಸಿ ಸೂರ್ಯ
ಬಿಂಬಿಸುತ್ತಾನೆ ...
*ಪುರೋಹಿತ*
ಶೂದ್ರ ಕೊಟ್ಟ ಅನ್ನ
ತೆಗೆದು ಕೊಳ್ಳದ ಜನ
ಅವನು ಕೊಟ್ಟಷ್ಟೂ
ಪಡೆಯುತ್ತಾನೆ ಹಣ...
*ಮಾತೃ ಹೃದಯ*
ಉಳುಮೆ ಮಾಡಿ
ಹೃದಯಾ ಸೀಳಿ
ಬಿತ್ತಿದರು
ಇಳೆ
ನಮಗೆ ಹಸಿರನ್ನೆ
ಕೊಡುತ್ತಾಳೆ...
*ಭ್ರಮೆ*
ಕೈಯಲ್ಲಿ ಕನ್ನಡಿ
ಹಿಡಿದು ಕೊಂಡವರೆಲ್ಲಾ
ಬೇಲೂರ ಶಿಲಾ
ಬಾಲಿಕೆಯರಾಗುವುದಿಲ್ಲ...!
*ಹಾಕ-ಬೇಕಾದ್ದು*
ದೇವರಿಗೆ
ಪ್ರದಕ್ಷಿಣೆ,
ಅರ್ಚಕರಿಗೆ
ದಕ್ಷಿಣೆ..!
*ಬಡವ*
ವೇದಿಕೆಯಲ್ಲಿ
ಸಾಹಿತಿಗೆ ಸನ್ಮಾನ;
ಜೊತೆಗೆ ಫಲ_ಹಾರ,
ಕೊನೆಗೆ ಮನೆಯಲ್ಲೂ
ಅದೇ ಗತಿ,
ಬರೀ ಫಲಾಹಾರ..!!
*ಅಲಿಖಿತ ನಿಯಮ*
ದೇವರನು
ಕಾಣಲಿಕೆ
ಬಂದವರು
ಹಾಕಲೇಬೇಕು
ಕಾಣಿಕೆ ..!
*ಚಂದ*
ನೋಡಲಿಕ್ಕೆ ಅಂದ,
ಚಂದ ಸುಗಂಧ
ಹೊಂದಿದ್ದಾಗ
ಮಾತ್ರ ಮರ
ಬರುವುದು ಭ್ರಮರ...
*ಅಕ್ಕರೆ*
ಮೇಲೆ ತೇಲುತ್ತಾ
ಬೀಗುವ ಬಲ್ಬಿಗಿಂತ
ಪಕ್ಕದಲ್ಲಿ ಕುಳಿತು
ಅಕ್ಕರೆ ತೋರುವ
ಮೊಂಬತ್ತಿಯಿಂದ ಬಂದ
ಬೆಳಕು ಚಂದ...

- ಪ್ರಸನ್ನ ಆಡುವಳ್ಳಿ

3 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ